ಶಿಗ್ಗಾಂವಿಯ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳಿಂದ ಸಸ್ಯ ಶ್ರಾವಣ ಕಾರ್ಯಕ್ರಮ

ಮನುಷ್ಯನ ಅತಿಯಾದ ಆಶೆಯಿಂದ ಪರಿಸರದ ಮೇಲೆ ಅನೇಕ ದುಷ್ಪರಿಣಾಮಗಳು ಬೀರುತ್ತಿವೆ ಎಂದು ಬಂಕಾಪುರದ ಕೆಂಡದಮಠದ ಪರಮಪೂಜ್ಯರು ಹೇಳಿದರು ಶಿಗ್ಗಾಂವ ತಾಲೂಕಿನ ಮುನವಳ್ಳಿ ಗ್ರಾಮದಲ್ಲಿ ಶಿಗ್ಗಾಂವಿಯ ವಿರಕ್ತಮಠದಿಂದ ನಡೆಯುತ್ತಿರುವ ಸಸ್ಯ ಶ್ರಾವಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು ನಮ್ಮದು ಕ್ರಷಿ ಪ್ರಧಾನ ರಾಷ್ರ್ತವಾಗಿದೆ ಹಿಂದಿನಿಂದಲ್ಲೂ ಹಳ್ಳಿಗಳಲ್ಲಿ ಕ್ರಷಿಯೆ ಪ್ರಮುಖವಾಗಿತ್ತು ಅಂದು ನಮ್ಮ ತಿಪ್ಪೆಯ ಗೊಬ್ಬರದಿಂದ ಹೊಲಗಳು ಪಲವತ್ತತೆಯಿಂದ ಕೂಡಿರುತ್ತಿದ್ದವು ಆದರೆ ಇವತ್ತಿನ ಸಂದರ್ಬದಲ್ಲಿ ರಸಾಯನಿಕಗಳನ್ನು ಬಳಸಿ ಭೂಮಿಯ ಪಲವತ್ತತೆ ನಾಶವಾಗುವುದರ ಜೊತೆಗೆ ಪರಿಸರವು ಕೂಡ ಮಲೀನವಾಗುತ್ತಿದೆ. ಇಂದು ಕೇವಲ ಮಾತಿನಿಂದಲೆ ಕ್ರಷಿ ಮಾಡುವ ರೈತರಿದ್ದಾರೆ ಹೊರತು ಹೊಲದಲ್ಲಿ ಬೆವರಿಸಿ ಕ್ರಷಿ ಮಾಡುವ ರೈತರ ಸಂಖ್ಯೆ ಕಡಿಮೆ ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಸೋಮಣ್ಣ ಬೇವಿನಮರದ ಅವರು ಮಾತನಾಡಿ ಶಿಗ್ಗಾಂವಿಯ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಜಿಗಳು ಒಂದು ಒಳ್ಳೆಯ ಕಾರ್ಯವನ್ನು ಮಾಡುತ್ತಿದ್ದಾರೆ ಇಂದು ಅನೇಕ ಕಾರಣಗಳಿಂದ ಪರಿಸರ ನಾಶವಾಗುತ್ತಿದೆ ಕಾಲ ಕಾಲಕ್ಕೆ ಆಗಬೇಕಾದ ಪ್ರಕ್ರತಿಯ ಸಹಜ ಕ್ರಿಯಯಲ್ಲಿ ಬದಲಾವಣೆಯಾಗಿವೆ ಇದು ಮನುಷ್ಯನ ತಪ್ಪಿನಿಂದ ಆಗುತ್ತಿದೆ ಹಾಗಾಗಿ ಸಸ್ಯ ಶ್ರಾವಣ ಕಾರ್ಯಕ್ರಮದ ಮೂಲಕ ಜಾಗ್ರತಿ ಮೂಡಿಸುತ್ತಿರುವ ಶ್ರೀಗಳ ಕಾರ್ಯ ಶ್ಲಾಘನೀಯ ಎಂದರು.
ಶಿಗ್ಗಾಂವಿ ಮಂಡಲದ ಬಿ.ಜೆ.ಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ ಶಿಗ್ಗಾಂವಿಯ ವಿರಕ್ತಮಠದ ಸಂಖನಬಸವ ಮಹಾಸ್ವಾಮಿಗಳು ಸುಮಾರು ವರ್ಷಗಳಿಂದ ಈ ಶ್ರಾವಣ ಮಾಸದ ಸಂದರ್ಭದಲ್ಲಿ ತಾಲೂಕಿನ ಹತ್ತು ಹಳ್ಳಿಗಳಿಗೆ ಸುಮಾರು 10 ಸಾವಿರ ಸಸಿಗಳನ್ನು ಸ್ವತ ಹಳ್ಳಿಗಳಿಗೆ ತೆರಳಿ ಗಿಡಗಳನ್ನು ಮನೆ ಮನೆಗೆ ಹಂಚುವ ಕಾರ್ಯ ಮಾಡಿ ಪರಿಸರ ಜಾಗ್ರತಿ ಮೂಡಿಸುವ ಕಾರ್ಯವನ್ನು ಮಾಡುತ್ತಿರುವ ರಾಜ್ಯದ ಏಕೈಕ ಸ್ವಾಮಿಜಗಳು ಎಂದರು.ಈ ಸಂದರ್ಭದಲ್ಲಿ ವೈಧ್ಯರಾದ ಡಾ.ತಿರ್ಲಾಪುರ ಅವರು ಮಾತನಾಡಿದರು.
ವಿರಕ್ತಮಠದ ಸಂಗನಬಸವ ಮಹಾಸ್ವಾಮಿಜಿಗಳು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಕೆ.ಸಿ.ಸಿ ಬ್ಯಾಂಕ್ ನಿರ್ಧೇಶಕರಾದ ಗಂಗಣ್ಣ ಸಾತಣ್ಣವರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ರ್ಕತರಾದ ಕೊಟ್ರೇಶ ಮಾಸ್ತರ ಬೆಳಗಲಿ, ಪಕ್ಕಿರೇಶ ಮಾಸ್ತರ ಕೊಂಡಾಯಿ, ಉಮೇಶ ಅಂಗಡಿ ಕಲಾವಿದರಾದ ಬಸವರಾಜ ಶಿಗ್ಗಾಂವಿ, ಶರೀಫ ಮಾಕಪ್ಪನವರ ಹಾಗೂ ಮುನವಳ್ಳಿ ಗ್ರಾಮದ ಗ್ರಾಮಸ್ಥರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.